ಆಧಾರದ ಪೆಟ್ಟಿಗೆ
	ವೀರಶೈವರು ಲಿಂಗಪೂಜೆಗೆ ಬೇಕಾದ ಭಸ್ಮ, ರುದ್ರಾಕ್ಷಿ, ಪತ್ರೆ, ಪುಷ್ಪ, ಗಂಧ, ಧೂಪ, ಘಂಟೆ, ದರ್ಪಣ_ಮೊದಲಾದ ಶಿವಪೂಜಾವಸ್ತುಗಳನ್ನು ಇಟ್ಟುಕೊಳ್ಳುವ ಪೆಟ್ಟಿಗೆ. ಈ ಪೆಟ್ಟಿಗೆ ಇಹಪರಗಳಿಗೆ ಆಧಾರ, ಮಿಕ್ಕುದು ನಿರಾಧಾರ ಎಂಬುದು ಈ ಮಾತಿನ ಅರ್ಥ.												
(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ